ದಿನಾಂಕ: 02-7-2014 ರಂದು ಮಾಲೂರು ತಾಲ್ಲೂಕು ಮಾಸ್ತಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಮೊ.ಸಂ-83/2014 ರೀತ್ಯಾ ಪ್ರಕರಣ ದಾಖಲಿಸಾಗಿತ್ತು.
ಈ ಪ್ರಕರಣದಲ್ಲಿ ಅಂದಿನ ಎಸ್.ಪಿ ಸಾಹೇಬರಾದ ಶ್ರೀ ಅಜಯ್ ಹಿಲೋರಿ, ಐ.ಪಿ.ಎಸ್ ಮತ್ತು ಮಾನ್ಯ ಅಡಿಷನಲ್ ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಅಂದಿನ ಮಾಲೂರು ವೃತ್ತ ನಿರೀಕ್ಷಕರಾದ ಶ್ರೀ ಟಿ.ಎಂ.ಶಿವಕುಮಾರ್, ಸಿ.ಪಿ.ಐ, ಮಾಸ್ತಿ ಠಾಣೆಯ ಪಿ.ಎಸ್.ಐ ಸಿದ್ದಪ್ಪ ಮತ್ತು ಸಿಬ್ಬಂದಿಯವರು ಶೀಘ್ರವಾಗಿ ಆರೋಪಿಗಳನ್ನು ಬಂಧಿಸಿ ಘನ ನ್ಯಾಯಾಲಯಕ್ಕೆ ಹಾಜರ್ಪಡಿಸಿ ತನಿಖೆಯನ್ನು ಕೈಗೊಂಡು ಎಲ್ಲಾ ಸಾಕ್ಷ್ಯದಾರಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ದ ಅಂದಿನ ಸಿ.ಪಿ.ಐ ಶ್ರೀ ಟಿ.ಎಂ. ಶಿವಕುಮಾರ್ ರವರು ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ.
ಸದರಿ ಪ್ರಕರಣವು ಘನ 2ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಎಸ್.ಸಿ. ನಂ.202/2014 ರಲ್ಲಿ ವಿಚಾರಣೆ ನಡೆದು ದಿನಾಂಕ:15/09/2018 ರಂದು ಈ ಕೇಸಿನಲ್ಲಿ ಆರೋಪಿಗಳಾದ ಎ1- ಮುನಿಕೃಷ್ಣ ಬಿನ್ ತಿಮ್ಮರಾಯಪ್ಪ, 23ವರ್ಷ, ನಾಯಕರು, ಸೆಕ್ಯೂರಿಟಿ ಕೆಲಸ, ವಾಸ: ಕುಪ್ಪೂರು ಗ್ರಾಮ, ಮಾಲೂರು ತಾಲ್ಲೂಕು, ಎ2- ನಾರಾಯಣಸ್ವಾಮಿ ಬಿನ್ ಚೌಡಪ್ಪ, 22ವರ್ಷ, ನಾಯಕರು, ಕೂಲಿ, ವಾಸ: ಕುಪ್ಪೂರು ಗ್ರಾಮ, ಮಾಲೂರು ತಾಲ್ಲೂಕು, ಎ3- ಅನಿಲ್ ಕುಮಾರ್ ಬಿನ್ ನಾರಾಯಣಸ್ವಾಮಿ, 20ಜವರ್ಷ, ಪ.ಜಾತಿ, ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ 2ನೇ ಬಿಕಾಂ ವಿದ್ಯಾರ್ಥಿ, ವಾಸ:ಕುಪ್ಪೂರು ಗ್ರಾಮ, ಮಾಲೂರು ತಾಲ್ಲೂಕು. ಎ4-ಕೃಷ್ಣ @ ಕೃಷ್ಣಮೂರ್ತಿ ಬಿನ್ ಯಲ್ಲಪ್ಪ, 20ವರ್ಷ, ಪ.ಜಾತಿ, ಟ್ರಾಕ್ಟರ್ ಚಾಲಕ, ಕುಪ್ಪೂರು ಗ್ರಾಮ, ಮಾಲೂರು ತಾಲ್ಲೂಕು, ರವರಿಗೆ ಕಲಂ 235(2) ಸಿ.ಆರ್.ಪಿ.ಸಿ ರೀತ್ಯಾ ಗಲ್ಲು ಶಿಕ್ಷೆಯನ್ನು ವಿಧಿಸಿ ಆಧೇಶ ಮಾಡಿರುತ್ತೆ. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಮತ್ತು ತನಿಖೆಗೆ ಸಹಕರಿಸಿದ ಎಲ್ಲಾ ಆದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಶಿಸಿರುತ್ತಾರೆ.