ಮುಳಬಾಗಲು ಗ್ರಾಮಾಂತರ ಪೊಲೀಸರವರಿಂದ ಅಂತರ ರಾಜ್ಯ ಕುಖ್ಯಾತ ಕಳ್ಳನ ಬಂಧನ. 405 ಗ್ರಾಂ ಚಿನ್ನದ ಒಡವೆಗಳು ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿರುವ ಬಗ್ಗೆ

ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಕಳವು ಪ್ರಕರಣಗಳಲ್ಲಿ  ಆರೋಪಿ ಮತ್ತು ಮಾಲುಗಳ ಪತ್ತೆ ಸಲುವಾಗಿ ಕೋಲಾರ ಜಿಲ್ಲೆಯ,  ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ ರೋಹಿಣಿ ಕಟೋಚ್‌ ಸಪೆಟ್‌ ಐ.ಪಿ.ಎಸ್. ರವರ ಮತ್ತು  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ರಾಜೀವ್, ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ  ಶ್ರೀ ಬಿ.ಕೆ. ಉಮೇಶ್, ಡಿವೈ. ಎಸ್.ಪಿ. ಮುಳಬಾಗಲು ಉಪ ವಿಭಾಗ, ಶ್ರೀ ಎ. ಸುಧಾಕರರೆಡ್ಡಿ, ಸಿಪಿಐ ಮುಳಬಾಗಲು ವೃತ್ತ, ಶ್ರೀ. ಬಿ.ಟಿ. ಗೋವಿಂದು  ಪಿ.ಎಸ್.ಐ. ಮುಳಬಾಗಲು ಗ್ರಾ ಪೊಲೀಸ್ ಠಾಣೆ ಮತ್ತು  ಸಿಬ್ಬಂದಿಯವರಾದ  ಎ.ಎಸ್.ಐ. ಲಿಂಗಯ್ಯ, ನಾಗರಾಜ, ಗುರುಪ್ರಸಾದ್, ಎಂ.ರಮೇಶ್, ಇ.ವಿ.ಮಂಜುನಾಥ,  ಸಿ.ಜಿ.ನಾರಾಯಣಸ್ವಾಮಿ,  ಗೋವಿಂದರಾಜು, ಶಂಕರ್ ಶೇಖರ್, ಸತ್ಯನಾರಾಯಣಸಿಂಗ್, ಶ್ರೀನಿವಾಸ, ಪ್ರಶಾಂತ್, ಲಕ್ಷ್ಮೀನಾರಾಯಣ, ರಾಜೇಂದ್ರರೆಡ್ಡಿ, ಕರುಣ್ ಸಿಂಗ್, ರಮೇಶ್, ರವಿನಾಯಕ್, ವಿಶ್ವನಾಥ್ ,ರಮೇಶ್‌,ಶ್ರೀನಿವಾಸಮೂರ್ತಿ,ಅಮರನಾಥ,ನಾರಾಯಣಸ್ವಾಮಿ,ಶ್ರೀನಿವಾಸ್‌,ಮಧುಕುಮಾರ್,ಶಿವರಾಜ್,ನಾರಾಯಣಸ್ವಾಮಿ,ಸುಬ್ರಮಣಿ,ಚಾಲಕಅಮರನಾರಾಯಣ,  ರವರ ತಂಡವು, ದಿನಾಂಕ:29/01/2018 ರಂದು  ಮುಳಬಾಗಿಲಿನಲ್ಲಿ ಕುಖ್ಯಾತ ಆರೋಪಿ ಕರ್ನಾಟಕ,ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜ್ಯಗಳಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತು  ಈ ಹಿಂದೆ ಸುಮಾರು 50ಕ್ಕಿಂತ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೆಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯಾದ ಬಾಬು@ ಖಾದರ್ ಬಾಷ @ ತೋಟಕನಮುಬಾಬು ಬಿನ್ ದಾದುಸಾಬು 40 ವರ್ಷ ಹಾಲಿ ವಾಸ  ಮರಹೇರು ಗ್ರಾಮ, ಮತ್ತು ಶಾಮೀರ್ ಮೊಹಲ್ಲಾ ಮುಳಬಾಗಲು , ಹಿಂದಿನ ವಾಸ ತೋಟಕನಮು ಗ್ರಾಮ, ವಿ ಕೋಟೆ ಆಂಧ್ರಪ್ರದೇಶ. ಎಂಬುವರನ್ನು ದಸ್ತಗಿರಿ ಮಾಡಿ, ಆರೋಪಿಯು ಮುಳಬಾಗಲು ತಾಲ್ಲೂಕು , ಉತ್ತನೂರು, ತಾಯಲೂರು, ಮಲ್ಲನಾಯಕನಹಳ್ಳಿ  ಹಾಗೂ ಬೆಂಗಳೂರಿನ ಚಂದಾಪುರ, ಗೌರಿಬಿದನೂರು ಟೌನ್, ವಿ. ಕೋಟೆ ಕಡೆ ಆರೋಪಿ ಬಾಬು @ ಖಾದರ್ ಬಾಷ ಇವರ ಸಹಚರರಾದ ಅಡುಗೆ ಶಂಕರ, ನದೀಮ್, ಮತ್ತು ನದೀಮ್, ಜಬಿ ಎಂಬುವರು ಸೇರಿ ಕಳವು ಮಾಡಿದ್ದ ಪೈಕಿ  405 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 300 ಗ್ರಾಂ ತೂಕದ ಬೆಳ್ಳಿ ಒಡವೆಗಳು  ಒಟ್ಟು ಮಾಲುಗಳ  ಬೆಲೆ ಸುಮಾರು 12 ಲಕ್ಷ 15 ಸಾವಿರ ರೂ.  ಅಮಾನತ್ತುಪಡಿಸಿಕೊಂಡು 4 ಕಳವುಪ್ರಕರಣಗಳು ಪತ್ತೆ ಮಾಡುವಲ್ಲಿ ಯಶ್ವಸಿಯಾಗಿರುತ್ತಾರೆಂದು  ಪೊಲೀಸ್  ಅಧೀಕ್ಷಕರಾದ ಡಾ ರೋಹಿಣಿ ಕಟೋಚ್‌ ಸಪೆಟ್‌ ಐ.ಪಿ.ಎಸ್ ರವರು  ಈ ತಂಡಕ್ಕೆ  ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *