ಮುಳಬಾಗಿಲು ಪೊಲೀಸರ ಕಾರ್ಯಾಚರಣೆ: ವಾಹನ ಕಳ್ಳರ ಬಂಧನ

ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ನಂತರ ಕಾರಿನ ಚಾಲಕನನ್ನು ಬೆದರಿಸಿ ಕಾರುಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಅಪರಾಧಿಗಳನ್ನು ಮುಳಬಾಗಿಲು ಪೊಲೀಸರು ಬಂಧಿಸಿರುತ್ತಾರೆ. ಇಂತಹುದೇ ಘಟನೆಯ ಬಗ್ಗೆ ಇತ್ತೀಚೆಗೆ ಮುಳಬಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಸುತ್ತ ಮುತ್ತಲ ಠಾಣೆಗಳಿಗೆ ಮಾಹಿತಿಯನ್ನು ನೀಡಿದ್ದರು. ಇದರ ಪರಿಣಾಮ ಕೆ.ಜಿ.ಎಫ್ ಬೇತಮಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಹೈವೇ ಪೆಟ್ರೋಲಿಂಗ್ ಪೊಲೀಸರು ಆರೋಪಿಗಳನ್ನು ಹಿಡಿದಿರುತ್ತಾರೆ. ನಂತರ ಮುಳಬಾಗಿಲು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ.

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಹಾಗೂ ಮುಳಬಾಗಿಲು ಡಿ.ಎಸ್.ಪಿ ರವರಾದ ಶ್ರೀ ಬಿ.ಕೆ.ಉಮೇಶ್  ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಸಿ.ಪಿ.ಐ ಶ್ರೀ ಸುಧಾಕರ ರೆಡ್ಡಿ ರವರ ನೇತೃತ್ವದಲ್ಲಿ ಮುಳಬಾಗಿಲು ನಗರ ಪಿ.ಎಸ್.ಐ ರವರಾದ ಭೈರ ಹಾಗೂ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಗೋವಿಂದ ರವರು ತಮ್ಮ ಸಿಬ್ಬಂದಿಯವರ ನೆರವಿನೊಂದಿಗೆ ಆರೋಪಿಗಳನ್ನು ಬಂದಿಸಿ ವಿಚಾರಣೆ ಮಾಡಿ ಇವರ ನೀಡಿದ ಸುಳಿವಿನ ಮೇರೆಗೆ ಒಟ್ಟು ರೂ. ೩೮,೦೦,೦೦೦-೦೦ ಲಕ್ಷ ಬೆಲೆ ಬಾಳುವ  ಮೂರು ಟೊಯೋಟಾ ಇಟಿಯೋಸ್ ವಾಹನಗಳು, ಒಂದು ಇನ್ನೋವಾ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತ ಆರೋಪಿಗಳ ವಿವರ

೧. ವಿಷ್ಣು ಕುಮಾರ್‍ @ ವಿಷ್ಣು ಬಿನ್ ಶ್ರೀನಿವಾಸರೆಡ್ಡಿ, ೨೫ ವರ್ಷ, ಕಾರ್‍ ಚಾಲಕ ವೃತ್ತಿ, ಕರೆಮಿಂಡಹಳ್ಳಿ, ರಾಮಸಾಗರ ಪೋಸ್ಟ್, ಕ್ಯಾಸಂಬಳ್ಳಿ, ಬಂಗಾರಪೇಟೆ ತಾಲೂಕು

೨. ಮಧುಕುಮಾರ್‍ ಬಿನ್ ರಾಮರೆಡ್ಡಿ, ನಂ೨೬, ಚಿನ್ನಪ್ಪನ ಹಳ್ಳಿ, ಮಾರತ್ ಹಳ್ಳಿ ಕಾಲೋನಿ, ಬೆಂಗಳೂರು ಉತ್ತರ.

Leave a Reply

Your email address will not be published. Required fields are marked *