ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆ: ಮುಳಬಾಗಿಲು

 

ಕೋಲಾರ ಜಿಲ್ಲೆಯ ಮುಳಬಾಗಿಲು ಪೊಲೀಸ್ ಠಾಣೆ ಸರಹದ್ದಿನ ಸುಧಾರಿತ ಗಸ್ತು ವ್ಯವಸ್ಥೆಯ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ.ರೋಹಿಣಿ ಕಟೋಚ್ ಸೇಪತ್  ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಹೊಸ ಬೀಟು ವ್ಯವಸ್ಥೆಯ ಉಪಯುಕ್ತತೆಯ ಕುರಿತು ವಿವರಿಸಿದರು.

ಪ್ರತಿಯೊಂದು ಗ್ರಾಮ, ಹೋಬಳಿ, ಬಡಾವಣೆಗಳಿಗೆ ನೇಮಕಗೊಂಡಿರುವ ಬೀಟು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಕುರಿತು ವಿವರಿಸಿ, ಬೀಟು ಅಧಿಕಾರಿಯು ಆಯಾ ಸರಹದ್ದಿನಲ್ಲಿರುವ ಜನಸಾಮಾನ್ಯರ ಎಲ್ಲಾ ರೀತಿಯ ಕಷ್ಟಸುಖಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕರೆ ನೀಡಿದರು. ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜು, ಕಛೇರಿ, ಕಾರ್ಖಾನೆ ಸೇರಿದಂತೆ ವಿವಿಧ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಿ, ಸಮಸ್ತ ನಾಗರೀಕರಿಗೆ ಪೊಲೀಸ್ ಇಲಾಖೆಯ ವತಿಯಿಂದ ಆಗಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ಈಗಾಗಲೇ ನಿಯೋಜನೆಗೊಂಡಿರುವ ಬೀಟು ಪೊಲೀಸ್ ಅಧಿಕಾರಿಯ ಮೂಲಕ ಮಾಡಿಸಿಕೊಡಬೇಕೆಂದು, ಇಲ್ಲವೇ ತಂತಮ್ಮ ಸಮಸ್ಯೆ ಕುರಿತು ಮೇಲಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವರು ಕೋರಿದರು.

ಕಾರ್ಯಕ್ರಮದಲ್ಲಿ ಶ್ರೀ ಬಿ.ಕೆ.ಉಮೇಶ್, ಡಿ.ಎಸ್.ಪಿ, ಮುಳಬಾಗಿಲು,   ಶ್ರೀ ಸುಧಾಕರ್‍ ರೆಡ್ಡಿ, ಸಿ.ಪಿ.ಐ ಮುಳಬಾಗಿಲು ವೃತ್ತ, ಶ್ರೀ ಭೈರ, ಪಿ.ಎಸ್.ಐ ಮುಳಬಾಗಿಲು ನಗರ, ಶ್ರೀ ಗೋವಿಂದ.ಬಿ.ಟಿ, ಪಿ.ಎಸ್.ಐ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ,   ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಬೀಟು ಸದಸ್ಯರುಗಳು ಭಾಗವಹಿಸಿದ್ದರು. ಹೊಸ ಮಾದರಿ ಗಸ್ತು ವ್ಯವಸ್ಥೆಯ ಕುರಿತು ಸದಸ್ಯರುಗಳು ತಂತಮ್ಮ ಅಭಿಪ್ರಾಯಗಳನ್ನು ಮಂಡನೆ ಮಾಡಿದರು.

ಬೀಟ್ ಸದಸ್ಯರ ಸಭೆ: ಮುಳಬಾಗಿಲು

ಬೀಟ್ ಸದಸ್ಯರ ಸಭೆ: ಮುಳಬಾಗಿಲು

Leave a Reply

Your email address will not be published. Required fields are marked *