ದಿನದ ಅಪರಾಧಗಳ ಪಕ್ಷಿನೋಟ: ೦೬ ನೇ ಜುಲೈ, ೧೮:೦೦ ಗಂಟೆ

ಅಪ್ರಾಪ್ರ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರ ರಹಮತ್ ನಗರದ ನಾಗಲಬಂಡೆ ಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೪-೦೭-೨೦೧೭ ರಂದು ೧೯:೩೦ ಗಂಟೆ ಸಮಯದಲ್ಲಿ ೧೪ ವರ್ಷದ ಬಾಲಕಿಯನ್ನು ನಂಬಿಸಿ ಅವಳ ಮನೆಯಿಂದ ಕರೆದೊಯ್ದ ಮುಳಬಾಘಿಲು ನಗರದ ವಾಸಿಗಳಾದ ಸಲ್ಮಾನ್ ಪಾಷ, ಯಾರಬ್ ಮತ್ತು…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೫ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೊಪ್ಪಳ ಜಿಲ್ಲೆಯ ವಾಸಿಗಳಾದ ಮಾದವಿ, ಸಿಂಧೂರ ಮತ್ತು ಅನುಷಾ ಎಂಬುವರು ಎಪಿ-೩೭-ಸಿಎ-೪೮೮ ಸಂಖ್ಯೆಯ ಕಾರಿನಲ್ಲಿ ತಿರುಪತಿಗೆ ಹೋಗುವ ಸಲುವಾಗಿ ದಿನಾಂಕ  ೦೫-೦೭-೨೦೧೭ ರಂದು ೦೬:೧೫ ಗಂಟೆ ಸಮಯದಲ್ಲಿ  ಕೋಲಾರ ನಗರ ಹೊರವಲಯದ ಟಮಕ ಬಳಿ ಎನ್.ಹೆಚ್ ೭೫ ರಸ್ತೆಯಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಇವರ ಮುಂಭಾಗ ಹೋಗುತ್ತಿದ್ದ ಕ್ಯಾಂಟ್ರೋ ವಾಹನ ಸಂಖ್ಯೆ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೫ ನೇ ಜುಲೈ ೧೦:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ನಿಂತಿದ್ದ ೪೦೭ ಟೆಂಪೋ ವಾಹನಕ್ಕೆ ಬೊಲೇರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನದಲ್ಲಿದ್ದ ಇಬ್ಬರು ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ದೊಡ್ಡಹಸಾಳ ಗ್ರಾಮದ ವಾಸಿ ಸೋಮಶೇಖರ್‍ ಹಾಗೂ ವಿಳಾಸ ತಿಳಿಯಬೇಕಾದ ಮತ್ತೊಬ್ಬ ಶರಣ್ ಎಂಬುವರು ಮೃತಪಟ್ಟವರು. ಇವರಿಬ್ಬರೂ ದಿನಾಂಕ ೦೪-೦೭-೨೦೧೭ ರಂದು ೦೩:೩೦ ಗಂಟೆ ಸಮಯದಲ್ಲಿ ಬೊಲೇರೋ ಗೂಡ್ಸ್ ವಾಹನ ಸಂಖ್ಯೆ…

Continue reading

ಕೋಲಾರ ಜಿಲ್ಲೆಯಾದ್ಯಂತ ಸುಧಾರಿತ ಗಸ್ತು ವ್ಯವಸ್ಥೆ ಜಾರಿ

ಕೋಲಾರ ಜಿಲ್ಲೆಯಾದ್ಯಂತ ಸುಧಾರಿತ ಗಸ್ತು ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ಸಂಬಂಧ ದಿನಾಂಕ:04/07/2017 ರಂದು ಮಾಸ್ತಿ ಪೊಲೀಸ್ ಠಾಣೆಯ ಅವರಣದಲ್ಲಿ ಬೀಟ್ ನಾಗರೀಕ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸಭೆಯಲ್ಲಿ ಕೋಲಾರ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರಾದ ಶ್ರೀ. ಎಂ.ರಾಜೀವ್ ರವರು ಬೀಟ್ ನಾಗರೀಕ ಸದಸ್ಯರಿಗೆ ಸುಧಾರಿತ ಗಸ್ತು ವ್ಯವಸ್ಥೆಯ ಬಗ್ಗೆ ಮಾಹಿತಿಗಳನ್ನು ನೀಡಿದರು ಮತ್ತು ಬೀಟ್ ನಾಗರೀಕ ಸದಸ್ಯರು ಪೊಲೀಸರೊಂದಿಗೆ ಸಹಕರಿಸಿ ಅವರ ಗ್ರಾಮಗಳಲ್ಲಿ ಯಾವುದೇ ರೀತಿಯ ಆಕ್ರಮ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೪-೦೭-೨೦೧೭, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಹೆಚ್.ಗೊಲ್ಲಹಳ್ಳಿ ಗ್ರಾಮದ ಬಳಿಯ ಅನನ್ಯ ಪೌಲ್ಟ್ರಿ ಫಾರಂ ಬಳಿ ಕೃತ್ಯ ಸಂಭವಿಸಿರುತ್ತದೆ. ಬಿಹಾರದ ವಾಸಿಯಾದ ಸುನಿಲ್ ಷಾ (೨೫) ಎಂಬುವರು ದಿನಾಂಕ ೦೩-೦೭-೨೦೧೭ ರಂದು ೨೨:೦೦ ಗಂಟೆ ಸಮಯದಲ್ಲಿ ಅನನ್ಯ ಪೌಲ್ಟ್ರ ಫಾರಂ ಬಳಿ ತನ್ನ ಲಾರಿಯನ್ನು ಲೋಡ್ ಮಾಡಿಸಲು ನಿಲ್ಲಿಸಿ ಫಾರಂ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಆ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೩೦-೦೬-೨೦೧೭, ೧೦:೦೦ ಗಂಟೆ

ವರದಕ್ಷಿಣೆ ಕಾಯ್ದೆ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ದೊಡ್ಡ ಹಸಾಳ ಗ್ರಾಮದ ವಾಸಿ ಶ್ರೀನಾಥ್ ಎಂಬುವರೊಡನೆ ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ವಾಸಿ ಅಹಲ್ಯ ರವರನ್ನು ಈಗ್ಗೆ ಮೂರು ವರ್ಷಗಳ ವಿವಾಹ ಮಾಡಿಕೊಡಲಾಗಿತ್ತು. ವಿವಾಗಹವಾದ ಒಂದು ವರ್ಷದ ನಂತರದಿಂದ ಶ್ರೀನಾಥ್, ಇವರ ತಾಯಿ ವೆಂಕಟಮ್ಮ, ಸೋದರಮಾವ ಮುನಿರಾಜು ಇವರೆಲ್ಲರೂ ಸೇರಿಕೊಂಡು ತವರುಮನೆಯಿಂದ ಹಣವನ್ನು ತೆಗೆದುಕೊಂಡು ಬಾ ಎಂದು ಕಿರುಕುಳ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೨೮-೦೬-೨೦೧೭, ೧೮:೦೦ ಗಂಟೆ

ಕೊಲೆ ಪ್ರಯತ್ನ: ಕೊಲೆ ಪ್ರಯತನ್ಕ್ಕೆ ಸಂಬಂಧಿಸಿದಂತೆ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಎಗುವದೊಂಬರಪಲ್ಲಿ ಹಳ್ಳಿಯ ನೀಲ್‌ಬಾಗ್ ಶಾಲೆಯ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೬-೨೦೧೭ ರಂದು ೨೧:೩೦ ಗಂಟೆ ಸಮಯದಲ್ಲಿ ಶ್ರೀನಿವಶಪುರ ತಾಲೂಕು ಮುದಿಮಡಗು ಗ್ರಾಮದ ವಾಸಿ ಆಶ್ವಿನಿ (೨೭) ಎಂಬುವರ ಮೇಲೆ ಹಲ್ಲೆ ನಡೆಸಿದ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುತ್ತಾರೆ. ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ.

Continue reading

ಕೊಲೆ ಪ್ರಕರಣ ಬೇಧಿಸಿದ ಮುಳಬಾಗಿಲು ಪೊಲೀಸರು

ದಿನಾಂಕ ೨೫-೦೬-೨೦೧೭ ರಂದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ನಾಘನಹಳ್ಳಿ ಗ್ರಾಮದ ಹಾಳುಬಾವಿಯಲ್ಲಿ ನಾಗನಹಳ್ಳಿ ಗ್ರಾಮದ ವಾಸಿ ಸಾವಿತ್ರಮ್ಮ ಹಾಗೂ ಸಾತನುರು ಗ್ರಾಮದ ವಾಸಿ ರೆಡ್ಡಪ್ಪ ಎಂಬುವರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದಿದ್ದು ಈ ಹಿನ್ನೆಲೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ನಂಗಲಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರೋಹಿಣಿ ಕಟೋಚ್ ಸೇಪತ್ ರವರು ಸೂಕ್ತ…

Continue reading

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯದ ಮೇಲೆ ಮತ್ತು ಸಮಾಜ ಮತ್ತು ಸಾರ್ವಜನಿಕರ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ನಾಗರೀಕರು ಇವುಗಳ ಬಳಕೆಯಿಂದ ದೂರವಿರಬೇಕಾಗಿ ಕೋರಿದೆ. ಅದರಲ್ಲೂ ಶಾಲ/ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕರು, ಅಪ್ರಾಪ್ತ ವಯಸ್ಸಿನ ಮಕ್ಕಳು ಈ ಕುರಿತು ಎಚ್ಚರಿಕೆಯಿಂದ ಇದ್ದು ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ಗಮನ ಹರಿಸುವುದು ಎಲ್ಲರ ಕರ್ತವ್ಯವಾಗ ಬೇಕಾಗಿದೆ. ಕಾನೂನು ಬಾಹಿರವಾಗಿ, ಅಕ್ರಮವಾಗಿ ಮಾದಕ ದ್ರವ್ಯಗಳ ಸಂಗ್ರಹಣೆ, ಸರಬರಾಜು, ಸೇವನೆಗೆ ಪ್ರಚೋದನೆ ನೀಡುವಂತಹ ವ್ಯಕ್ತಿಗಳ ವಿರುದ್ದ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೨೭-೦೬-೨೦೧೭, ೧೦:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಸ್ತಿ ಗ್ರಾಮದ ವಾಸಿ ವಾಸಿಂ ಎಂಬುವರು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ವಾಸಿಂ ರವರ ತಮ್ಮ ಸಂಬಂಧಿ ಅಬ್ರಿಜ್ ಎಂಬುವರೊಡನೆ ಆಟೋ ಸಂಖ್ಯೆ ಕೆಎ-೦೨-ಡಿ-೮೨೯೨ ರಲ್ಲಿ ಮಾಸ್ತಿ ಗ್ರಾಮದ ದೇವರಹಳ್ಳಿ ಕ್ರಾಸ್ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಆಟೋ…

Continue reading