ಕೋಲಾರ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ.ರೋಹಿಣಿ ಕಟೋಚ್ ಸೇಪತ್, ಐ.ಪಿ.ಎಸ್ ಅಧಿಕಾರ ಸ್ವೀಕಾರ

ದಿನಾಂಕ ೦೧-೦೬-೨೦೧೭ ರಂದು ಕೋಲಾರ ಜಿಲ್ಲೆಗೆ ನೂತನ ಎಸ್.ಪಿ ಯಾಗಿ ನೇಮಕಗೊಂಡಿರುವ ಡಾ.ರೋಹಿಣಿ ಕಟೋಚ್ ಸೇಪತ್, ಐ.ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಈ ಹಿಂದೆ ಜಿಲ್ಲೆಯ ಎಸ್.ಪಿ ಯಾಗಿದ್ದ ಡಾ.ದಿವ್ಯ ವಿ ಗೋಪಿನಾಥ್ ರವರಿಂದ ಪೂರ್ಣ ಪ್ರಭಾರ ಸ್ವೀಕರಿಸಿರುತ್ತಾರೆ. ಡಾ.ರೋಹಿಣಿ ಕಟೋಚ್ ಸೇಪತ್, ಐ.ಪಿ.ಎಸ್ ರವರು ಈ ಹಿಂದೆ ಕೆ.ಜಿ.ಎಫ್, ಕೊಪ್ಪಳ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ ಬೆಂಗಳೂರು ಈಶಾನ್ಯ ವಿಭಾಘದ ಡಿ.ಸಿ.ಪಿ ಯಾಗಿ ಹಾಗೂ ಎಫ್.ಎಸ್‌.ಎಲ್ ಘಟಕದ ನಿರ್ದೇಶಕರಾಗಿ…

Continue reading

ಅಕ್ರಮ ಮರಳು ಸಾಗಾಣಿಕೆ: ಲಾರಿ ಹಾಗೂ ಅಕ್ರಮ ಮರಳು ವಶ

ದಿನಾಂಕ ೩೧-೦೫-೨೦೧೭ ರಂದು ಬೆಳಗ್ಗೆ ಸುಮಾರು ೧೦:೦೦ ಗಂಟೆ ಸಮಯದಲ್ಲಿ ವೇಮಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಲಕ್ಷ್ಮಿನಾರಾಯಣ ರವರು ತಮ್ಮ ಸಿಬ್ಬಂದಿಯವರೊಡನೆ ಗಸ್ತಿನ ಕರ್ತವ್ಯದಲ್ಲಿದ್ದರು. ಈ ಸಮಯದಲ್ಲಿ ಇವರಿಗೆ ಚಾಕಾರಸನಹಳ್ಳಿಯ ಕೆರೆಯಲ್ಲಿ ಅಕ್ರಮವಾಗಿ ಮರಳು ಫಿಲ್ಟರ್‍ ಮಾಡುವ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಚಾಕಾರಸನಹಳ್ಳಿಯ ಕೆರೆಯಲ್ಲಿ ಅಕ್ರಮವಾಗಿ ಮರಳನ್ನು ಕೆಎ-೦೭-ಎ-೯೨೭ ಸಂಖ್ಯೆಯ ಲಾರಿಗೆ ತುಂಬಿಸಲಾಗುತ್ತಿತ್ತು. ಪೊಲೀಸರನ್ನು ನೋಡಿದ ಲಾರಿಯ ಚಾಲಕ ಲಾರಿಯನ್ನು ಅಲ್ಲೇ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೩೧-೦೫-೨೦೧೭

ಮಾರಣಾಂತಿಕ ರಸ್ತೆ ಅಪಘಾತ: ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರವಾಹನಕ್ಕೆ ಲಾರಿಯೊದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಟೇಕಲ್ ಹೋಬಳಿ ಹುಲುಗುಂಟೆ ಗ್ರಾಮದ ವಾಸಿ ಶ್ರೀನಿವಾಸ್ ಎಂಬುವರು ಮೃತಪಪಟ್ಟವರು. ದಿನಾಂಕ ೩೧-೦೫-೨೦೧೭ ರಂದು ೧೯:೧೫ ಗಂಟೆ ಸಮಯದಲ್ಲಿ ತನ್ನ ದ್ವಿಚಕ್ರವಾಹನ ಬಜಾಜ್ ಬಾಕ್ಸರ್‍ ಸಂಖ್ಯೆ ಕೆಎ-೦೪-ಇಸಿ-೧೦೫೮ ರಲ್ಲಿ ಕೋಲಾರ ತಾಲೂಕಿನ ಮುದುವತ್ತಿ ಗ್ರಾಮದ ಬಳಿ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೩೦-೦೫-೨೦೧೭

ಹೆಂಗಸು ಕಾಣೆಯಾಗಿರುವ ಬಗ್ಗೆ: ಕೋಲಾರ ನಗರ ಟಮಕ ಬಡಾವಣೆಯ ವಾಸಿ ೨೦ ವರ್ಷ ವಯಸ್ಸಿನ ಸೋನಿಯಾ ಎಂಬ ಹೆಂಗಸು ಕಾಣೆಯಾಗಿರುವ ಬಗ್ಗೆ ಗಲ್‌ಪೇಟೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೫-೨೦೧೭ ರಂದು ಸಂಜೆ ೦೫:೦೦ ಗಂಟೆ ಸಮಯದಲ್ಲಿ ಟಮಕದಲ್ಲಿ ವಾಸವಾಗಿದ್ದ ತನ್ನ ಗಂಡನ ಮನೆಯಿಂದ ಹೋದ ಸೋನಿಯಾ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

Continue reading