ಕೊಲೆ ಪ್ರಕರಣ ಬೇಧಿಸಿದ ಮುಳಬಾಗಿಲು ಪೊಲೀಸರು

ದಿನಾಂಕ ೨೧-೦೭-೨೦೧೭ ರಂದು ಮುಳಬಾಗಿಲು ಎನ್.ಹೆಚ್ -೪ ರಸ್ತೆಯ ಕಪ್ಪಲಮಡಗು ಗ್ರಾಮದ ಗೇಟ್ ಬಳಿ ವಸಂತಕುಮಾರ್‍ ತಂದೆ ವಾಸುದೇವರಾಜು, ೩೪ ವರ್ಷ, ಎನ್.ಆರ್‍.ಐ ಬಡಾವಣೆ, ಕಲ್ಕೆರೆ, ಕೆ.ಆರ್‍.ಪುರಂ ಬೆಂಗಳೂರು ರವರ ಮೃತ ದೇಹ ದೊರೆತಿದ್ದು ಇದು ಮೇಲ್ನೋಟಕ್ಕೆ ಅಪಘಾತವಲ್ಲದೇ ಕೊಲೆ ಎಂದು ಕಂಡು ಬಂದ ಪರಿಣಾಮ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್,…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೫ ನೇ ಜುಲೈ, ೧೮:೦೦ ಗಂಟೆ

ವ್ಯಕ್ತಿ ಕಾಣೆಯಾಗಿರುವ ಬಗ್ಗೆ: ಮಾಲೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಯಶವಮತಪುರ ಗ್ರಾಮದ ವಾಸಿ ಶೆಕ್ ಮುಜಾಸಿಮ್ ಎಂಬ ೨೧ ವರ್ಷದ ವ್ಯಕ್ತಿ ಕಾಣೆಯಾಗಿರುತ್ತಾನೆ. ದಿನಾಂಕ ೧೧-೦೭-೨೦೧೭ ರಂದು ಬೆಳಗ್ಗೆ ೦೭:೩೦ ಗಂಟೆಗೆ ತನ್ನ ಮನೆಯಿಂದ ಹೊರಟ ಇವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

Continue reading

ಅಕ್ರಮ ಮರಳು ಸಾಗಾಣಿಕೆ: ಲಾರಿ ಹಾಗೂ ಮರಳು ವಶ

ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೭-೨೦೧೭ ರಂದು ಬೆಳಗಿನ ಜಾವ ೦೨:೩೦ ಗಂಟೆ ಸಮಯಲ್ಲಿ ಕೋಲಾರ ಜಿಲ್ಲೆಯ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಶ್ರೀನಿವಾಸಪುರ ವೃತ್ತದ ನಿರೀಕ್ಷಕರಾದ ಶ್ರೀ ವೆಂಕಟರಮಣಪ್ಪ ರವರು ಕೋಲಾರ ಹೊರವಲಯದ ಸ್ಯಾನಿಟೋರೊಯಂ ಬಳಿ ಕರ್ತವ್ಯದಲ್ಲಿದ್ದರು. ಆ ಸಮಯದಲ್ಲಿ ಬಂಗಾರಪೇಟೆ ಕಡೆಯಿಂದ ಬಂದ ಟಿಪ್ಪರ್‍ ವಾಹನ ಸಂಖ್ಯೆ ಕೆಎ-೦೮-೫೮೦೨ ಅನ್ನು…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೪ ನೇ ಜುಲೈ, ೧೦:೦೦ ಗಂಟೆ

ಮನೆಗಳ್ಳತನ: ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳನತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌಔನ್ ಮಹಬೂಬ್ ನಗರದ ವಾಸಿ ಅಲ್ಲಾಬಕಾಶ್ ಎಂಬುವರ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೨-೦೭-೨೦೧೭ ರಂದು ಅಲ್ಲಾಬಕಾಶ್ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯ ಹೆರಿಗೆಯ ಸಂಬಂಧ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ಅಂದರೆ ದಿನಾಂಕ ೧೩-೦೭-೨೦೧೭ ರಂದು ಬೆಳಗ್ಗೆ ೦೬:೩೦ ಗಂಟೆಗೆ ತಮ್ಮ ಮನೆಗೆ ಹೋಗಿ ನೋಡಿದಾಗ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೨ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ: ಟ್ರಾಕ್ಟರ್‍ ಹರಿದ ಪರಿಣಾಮ ಮಹಿಳೆ ಮತ್ತು ಆಕೆಯ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ದ್ವಾಪಸಂದ್ರ ಗ್ರಾಮದ ಡಿ.ಕೆ ನಾರಾಯಣಸ್ವಾಮಿ ರವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೂಲತಃ ಒರಿಸ್ಸಾ ರಾಜ್ಯದ ನಿವಾಸಿಯಾದ ಬಿರಾಜಿನಿ ಗುಡೋ (೩೪) ಮತ್ತು ಈಕೆಯ ಮಗು ಮಿತ್ತಲ್ (೩) ಮೃತಪಟ್ಟವರು. ಬಿರಾಜಿನಿ ಗುಡೋ ರವರು ದಿನಾಂಕ ೧೨-೦೭-೨೦೧೭ ರಂದು…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೧ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೧೭ ರಂದು ೧೫:೩೦ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಯಲಚಹಳ್ಳಿ ಗ್ರಾಮದ ವಾಸಿ ನಾಗರಾಜ.ವಿ ಎಂಬುವರು ತಮ್ಮ ಬಜಾಜ್ ಬಾಕ್ಸರ್‍ ಸಂಖ್ಯೆ ಕೆಎ-೦೩-ಇಜೆ-೭೯೩೧ ರಲ್ಲಿ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ನರಸಾಪುರ ಕೆರೆ ಕಟ್ಟೆಯ ಬೆಳ್ಳೂರು ಬಳಿ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆಎ-೦೭-ಎಫ್-೧೬೩೩ ಕೆ.ಎಸ್.ಆರ್‍.ಟಿ.ಸಿ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೧೦ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ: ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೧೭ ರಂದು ೨೦:೨೦ ಗಂಟೆ ಸಮಯದಲ್ಲಿ ಮಾಲೂರು ತಾಲ್ಲೂಕು ಶಿವಾರಪಟ್ಟಣದ ವಾಸಿ ಲಕ್ಷ್ಮಣ್ ಎಂಬುವರು ನರಸಾಪುರ ಕಾಮತ್ ಹೋಟೆಲ್ ಮುಂಬಾಗಿ ಅಂಗಡಿಗೆ ಹೋಗುವ ಸಲುವಾಗಿ ಎನ್.ಹೆಚ್ ೭೫ ರಸ್ತೆಯನ್ನು ದಾಟುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕೆಎ-೦೨-ಎಂ.ಸಿ-೬೯೪೪ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೮ ನೇ ಜುಲೈ, ೧೦:೦೦ ಗಂಟೆ

ಸ್ಥಳೀಯ ಮತ್ತು ವಿಶೇಷ ಕಾಯ್ದೆ ಪ್ರಕರಣಗಳು:  ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಪಾಲಸಂದ್ರ ಲೇ ಔಟ್ ಬಡಾವಣೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೭-೭-೨೦೧೭ ರಂದು ೦೯:೩೦ ಗಂಟೆ ಸಮಯದಲ್ಲಿ ಪಾಲಸಂದ್ರ ಬಡಾವಣೆಯ ವಾಸಿ ಶ್ರೀಮತಿ ಶಿವಮಣಿ.ವಿ ಎಂಬುವರ ಮೇಲೆ ಜಗಳ ತೆಗೆದ ಮಂಜುನಾಥ, ಮುನಿಯಪ್ಪ, ಸುಶೀಲಮ್ಮ, ರೋಜ ಮತ್ತು ಸುಜಾತ ಎಂಬುವರು ಹಲ್ಲೆ ಮಾಡಿ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೭ ನೇ ಜುಲೈ, ೧೮:೦೦ ಗಂಟೆ

ಮನೆಗಳ್ಳತನ: ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೧೭ ರಂದು ಬೆಳಗ್ಗೆ ೧೦:೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಚೌಡೆಶ್ವರಿ ನಗರದ ಚವಗಿಳಾದ ಜೀವಾನಂದರೆಡ್ಡಿ ರವರು ತಮ್ಮ ಮನೆಗೆ ಡೋರ್‍ ಲಾಕಿ ಹಾಕಿಕೊಂಡು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಡೋರ್‍ ಲಾಕ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ರೂ. ೫,೦೦,೦೦೦-೦ ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಗೂ…

Continue reading

ದಿನದ ಅಪರಾಧಗಳ ಪಕ್ಷಿನೋಟ: ೦೬ ನೇ ಜುಲೈ, ೧೮:೦೦ ಗಂಟೆ

ಅಪ್ರಾಪ್ರ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರ ರಹಮತ್ ನಗರದ ನಾಗಲಬಂಡೆ ಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೪-೦೭-೨೦೧೭ ರಂದು ೧೯:೩೦ ಗಂಟೆ ಸಮಯದಲ್ಲಿ ೧೪ ವರ್ಷದ ಬಾಲಕಿಯನ್ನು ನಂಬಿಸಿ ಅವಳ ಮನೆಯಿಂದ ಕರೆದೊಯ್ದ ಮುಳಬಾಘಿಲು ನಗರದ ವಾಸಿಗಳಾದ ಸಲ್ಮಾನ್ ಪಾಷ, ಯಾರಬ್ ಮತ್ತು…

Continue reading